Submission 2416

ಅಪರಾಜಿತೆ

ರಚನೆ : ಪ್ರವೀಣ್ ಕೆ ಎನ್

----------------------------------

ಕನಸಿನ ಕೂಸ ಹೊತ್ತಳು ಗರ್ಭದಿ ಬಯಕೆಯ ಹುಟ್ಟಿಗವಳೇ ಬುನಾದಿ ತೊದಲ ನುಡಿಗಳಿಗು ನೀಡಿದಳು ಅರ್ಥ ಸೆರಗಲ್ಲಿ ಮುಚ್ಚಿಟ್ಟರು ತನಗಲ್ಲದ ಸ್ವಾರ್ಥ. ಪುಸ್ತಕದಲ್ಲಿರದ ಪಾಠಗಳ ಕಲಿಸಿದಳು ಶಿಕ್ಷಕಿಯಾಗಿ ಪತಿಯ ಏಳುಬೀಳುಗಳಲ್ಲಿ ಜೊತೆನಿಂತ ಸಹಭಾಗಿ ಎಲ್ಲರ ಸಲಹುತ್ತ ನಿಂತಳು ಮನೆಯ ಆಸರೆಯಾಗಿ ಮನಸುಗಳ ಬೆಸೆಯುತ್ತ ನೋವುಗಳ ಮರೆತ ತ್ಯಾಗಿ. ಮನದ ಮೋಡ ಮುಸುಕಿರಲು ನನಗವಳೇ ಹೊಸ ಹುರುಪು ಮತ್ತೆ ಮತ್ತೆ ನೆನೆಯುವ ತವಕಕೆ ಅವಳೇ ಹಳೆ ನೆನಪು ಅಪರಿಚಿತ ಜಗತ್ತಿನಲ್ಲಿ ಭೇಟಿಯಾದ ಮೊದಲ ಸ್ನೇಹಿತೆ ಪದಪುಂಜಗಳ ಪೋಣಿಸಿ ಬರೆದರು ಅವಳದು ಮುಗಿಯದ ಸಾರ್ಥಕತೆ.

----------------------------------

ನೋಂದಣಿ ಐಡಿ : KPFS2-6610

12
Votes
146
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top