Submission 2408

ನನ್ನವನು ಅವನು ನನ್ನವನು

ರಚನೆ : ದೀಕ್ಷಿತಾ ರೈ ಎಂ

----------------------------------

ಯಾರವನು ನನ್ನವನು ನನ್ನ ಮನದ ರಾಜ್ಯಕ್ಕೆ ರಾಜನಾದವನು ಎಲ್ಲಿರುವನು ನನ್ನವನು ನನ್ನ ಕನಸಿನ ಅರಮನೆಯ ಗೋಪುರಕ್ಕೆ ಕಳಸವಾದವನು ಹೇಗಿರವನು ನನ್ನವನು ನನ್ನ ಕಲ್ಪನೆಗೂ ನಿಲುಕದವನು ಓದಿದ್ದೆ ನಾನು ರಾಜಕುಮಾರಿಯ ಕುದುರೆಯ ಮೇಲೆ ಹೊತ್ತೊಯ್ದ ರಾಜನ ಕಥೆಗಳನ್ನು ನಾನೂ ಕಾಯಬಹುದೆ ನನ್ನ ರಾಜಕುಮಾರ ಕುದುರೆಯ ಮೇಲೇರಿ ನನ್ನ ಮನದಂಗಳಕ್ಕೆ ಬಂದಿಳಿವನೆಂದು ಎಲ್ಲಿರುವನು ನನ್ನವನು ಮಧುರ ನೆನಪುಗಳನ್ನು ನನ್ನ ಮನದ ಗೋಡೆಯ ಮೇಲೆ ಚಿತ್ರಿಸಿದವನು ಹೇಗಿರುವನು ನನ್ನವನು ಗಡಿಯಾರವೆಂಬ ನನ್ನ ಹೃದಯವನ್ನು ನಿಮಿಷ ನಿಮಿಷಕ್ಕೂ ಬಡಿದೆಬ್ಬಿಸಿ ನನ್ನ ಹೃದಯದ ಹೂದೋಟದಲ್ಲಿ ನಗೆ ಹೂವನ್ನು ನೆಟ್ಟವನು ಯಾರವನು ನನ್ನ ಉಸಿರಲ್ಲಿ ಬೆರೆತವನು, ಉಸಿರಿಗೆ ಉಸಿರಾಗಿ ಉಳಿದವನು ಯಾರವನು ನನ್ನವನು ನನಗಾಗೆ ಜನಿಸಿದವನು ನನ್ನ ಜೀವನದ ಪ್ರಯಾಣದ ದೋಣಿಗೆ ನಾವಿಕನಾದವನು ಅಂತರಂಗದ ಅಂತಃಪುರದಲ್ಲಿ ನನ್ನ ಬರುವಿಕೆಗಾಗಿ ಕಾಯುತ್ತಿರುವವನು

----------------------------------

ನೋಂದಣಿ ಐಡಿ : KPFS2-6606

45
Votes
262
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top