Submission 2410

ನನ್ನವನು

ರಚನೆ : ರಾಜೇಶ ಕೆ ಎಸ್

----------------------------------

ಬರೆಯಬೇಕೆನಿಸಿದರೂ ಬರೆಯಲಾಗುತ್ತಿಲ್ಲ, ಕಾರಣ ನನ್ನವನೆಂಬ ಓದುಗನಿಲ್ಲ, ಮಲ್ಲಿಗೆ ಮುಡಿದು , ಕುಂಕುಮ ತೊಟ್ಟು ಹಿಗ್ಗಾಡುತ್ತಿರುವೆ, ಆದರೂ ಈ ಖಾಲಿ ಮೌನ ನೀ ಬಾರದ ಗುಟ್ಟು ಬಿಟ್ಟು ಕೊಡಲಿಲ್ಲ ನೋಡು, ಮೂಡಿದ ಮಲ್ಲಿಗೆ ಮೆತ್ತಗಾಯಿತು, ಕುಂಕುಮ ಕರಗಿ ನೀರಾಯಿತು ಆದರೂ ಈ ಖಾಲಿ ಮೌನ ನಿನ್ನ ಗುಟ್ಟು ಬಿಟ್ಟು ಕೊಡಲಿಲ್ಲ ನೋಡು, ಅದೇನೋ ನೀ ಬಂದೆ ಹೇಳಿ ಹೋಗು, ಅದಕ್ಕೂ ನನ್ನ ಪರಿಚಯ ಮಾಡಿ ಹೋಗು, ನಿನ್ನ ಅಧಿಕಾರ ನನ್ನ ಅಹಂಕಾರ ಎಂದು ತಿಳಿಸಿ ಹೋಗು, ನೀ ಬರುವವರೆಗೂ ನನ್ನ ಕೊಂಚ ಕಾಡುವಂತೆ ಪಿಸುಗುಟ್ಟಿ ಹೋಗು

----------------------------------

ನೋಂದಣಿ ಐಡಿ : KPFS2-6607

0
Votes
90
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top