Submission 2396

ಮುದುರಿದ ದುಡ್ಡು

ರಚನೆ : ಕಿರಣಕುಮಾರ ಕೆ

----------------------------------

ಅವಳೊಂದು ಶ್ರೀ ಗೌರಿ, ಅವಳೆಸರೆ ಗೌರಿ, ನೋವನುಂಡವಳು, ಹಸಿವ ಮರೆತವಳು, ಛಲದಿ ಬದುಕಿದವಳು, ಮಕ್ಕಳ ಸಾಕಿದವಳು, ಗಂಡನ ಆರೈಸಿದವಳು, ಎಷ್ಟೇ ದುಡ್ಡಿದ್ದರೂ, ಮುದುರಿ, ಮುದುರಿ, ಸೊಂಟದಲ್ಲಿಟ್ಟವಳು, ಆ ದುಡ್ಡ ತೆಗೆದಾಗಲೆಲ್ಲ, ಬರೀ ನೋವಿನಹಾಡ ಆಡುವಳು, ತನಗಾಗಿ ಅಲ್ಲದೆ ತನ್ನವರಿಗಾಗಿ ಬದುಕಿದವಳು,ಲೆಕ್ಕದಲ್ಲಿ ಪಕ್ಕ ಇವಳು, ಆ ಮುದುರಿದ ದುಡ್ಡು, ಎಷ್ಟೇ ಮುದುರಿದ್ದರು, ಮತ್ತೆ,ಮತ್ತೆ, ಎಣಿಸುವವಳು, ಅವಳು ಬೆವರಹರಿಸಿ ದುಡಿದ ದುಡ್ಡೆಂದು ಅವಳು ಕೊಡುವಾಗಲೆಲ್ಲ ಬೇಸರಿಸುವಳು, ಮಗನೆನ್ನೊ ಕರುಣೆಯಿಂದ ಪ್ರೀತಿಯಿಂದ ನೀಡುವಳು, ಆ ಮುದುರಿದ ದುಡ್ಡು ಎಷ್ಟೇ ಮುದುರಿದ್ದರು, ನೋಡಿದಾಗಲೆಲ್ಲ ಬರಿ ಅವಳ ನೆನಪೇ ಮಾಡುವಳು, ಕರಿಗೌರಿ..

----------------------------------

ನೋಂದಣಿ ಐಡಿ : KPFS2-6596

23
Votes
215
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top