ಎಂದಿನಂತೆ
ರಚನೆ : ಮಂಜುಳ ಸಿ. ಎಸ್
----------------------------------
ಹೂಗಳಿಗೆ ಬೆಲೆ ಕಟ್ಟುವವರ ಹಂಗಿಲ್ಲ ತಂತಾನೆ ವಸಂತನ ತಾಳಕೆ ಅರಳಿ; ವಿರಹಕೆ ನೆಲಕೆ ಮರಳುತಿದೆ :ಎಂದಿನಂತೆ! ಮಾರುಕಟ್ಟೆಗೋ, ಮಸಣಕೋ,ಮದುವೆ ಮಂಟಪಕೋ ಅವಳ ಮುಡಿಗೋ ಶ್ರೀಮಂತರ ಮೇಜಿಗೋ-ಮೋಜಿಗೋ ಮಡಿದ ವೀರನೆದೆಗೋ ಶಯನ ಶ್ರಂಗಾರಕೋ ಕಲ್ಲಿನ ಮುಡಿಗೊ ಸಮಾಧಿಯ ಎದೆಗೋ! ಅಲ್ಲೆಲ್ಲಾ ಮಾರಲ್ಪಡದ ಹೂಗಳಿಗೂ ವಸಂತನ ನಿವಾ೯ಜ್ಯ ಪ್ರೇಮವಿದೆ ಅಂದುಕೊಳ್ಳುವಷ್ಟರಲ್ಲಿ ಇರುಳ ಮಾಯೆಗೆ ಕತ್ತಲಾಯ್ತು!! ಕಂಡುಕಾಣದಂತೆ ದುಂಬಿಗಳು ಗೂಡುಸೇರಿ ಬೆಳಕು ಮೂಡುತ್ತಲೆ ಮರಳಿ ಹುಡುಕಹೊರಟವು ಎಂದಿನಂತೆ !!
----------------------------------
ನೋಂದಣಿ ಐಡಿ : KPFS2-6594