Submission 2392

ಮೈಸೂರ ಒಲವೆ

ರಚನೆ : ಅಯ್ಯಪ್ಪ ಗುರಿಕಾರ

----------------------------------

ನೀ ನನ್ನ ಹೃದಯದ ಹಗಲಾಳೊ ಬೆಳಕು! ರವಿಗೂ ರಜೆಕೊಡಿಸುವ ನಿನ್ನದೇ ಹೊಳಪು. ಇಳಿ ಸಂಜೆಗೆ ಕೆಂಗನ್ನೆಯ ರಂಗ ತೂರಿದ ನಮ್ಮೂರ ಚಲುವೆ, ಮೈಸೂರ ಒಲವೆ.! ರವಿ ಸರಿದನು ಸವಿ ಸಂಜೆಯ ಪರದೆಗೆ ಮಣೆಹಾಕುತ ನಿನ್ನಯ ಸಿಹಿ ಮಾತಿಗೆ. ಗಗನ ಚುಕ್ಕಿ ರಂಗೇರಿದವು ಚೆಲುವೆಗೆ ಸಹಜ ಸಿರಿಯ ಧರಿತ್ರಿಗೆ, ಮೈಸೂರ ಒಲವಿಗೆ.! ನಿನ್ನೊಂದು ಸಂಸ್ಕೃತಿಯ ಹೊಸದೀಪ! ಬಲು ಅಪರೂಪ, ರಶ್ಮಿಯ ರೂಪ. ಮಲ್ಲಿಗೆಯ ಭಾವ, ಸೆಳೆಯುವ ಮೋಹ ಮೈಸೂರ ಚಲುವೆ, ನಮ್ಮೂರ ಒಲವೆ.!!

----------------------------------

ನೋಂದಣಿ ಐಡಿ : KPFS2-6593

257
Votes
1,262
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top