Submission 2194

ಪತಿದೇವನಿಗಾಗಿ

ರಚನೆ : ಗಾಯತ್ರಿ ಆನಂದ್

----------------------------------

ಪ್ರೀತಿಯ ಇನಿಯ ನೀನೇ ಜೀವದ ಗೆಳೆಯ ನೀನೇ ಪ್ರೇಮ ನೌಕೆ ಏರಿ ಎಷ್ಟು ದೂರ ಪ್ರಣಯದ ಪ್ರಯಾಣ ಸಾಗಿದೆ ಇಷ್ಟು ವಸಂತಗಳುರುಳಿದ್ದು ಗೊತ್ತೇ ಆಗಿಲ್ಲ ಅದೆಷ್ಟು ಏರಿಳಿತದ ಅಲೆಗಳು ನಮ್ಮೀ ಬದುಕಿನ ಸಾಗರದಲ್ಲಿ ಈಜಿ ದಡಸೇರಿದ್ದು ಗೊತ್ತೇ ಆಗಿಲ್ಲ ಮುದ್ದು ಮುನಿಸುಗಳ ನಡುವೆ ಬಿಟ್ಟಿರಲಾರದ ಪ್ರೀತಿಯ ಸೆಳೆತ ಬೆಸೆದ ಬಂಧವದೆಷ್ಟು ಬಿಗಿ ಗೊತ್ತೇ ಆಗಿಲ್ಲ ನನ್ನದು ನಿನ್ನದೆಂಬುವ ಬೇಧ ಆಗ ನನ್ನೆದೆಲ್ಲವೂ ನಿನ್ನದೆನ್ನುವ ಭಾವವೀಗ ಮನದ ಅಹಂ ಅಳಿದಿದ್ದು ಗೊತ್ತೇ ಆಗಿಲ್ಲ ಅದು ಹೇಗೋ ಹೃದಯದ ಮಿಡಿತವಾದೆ ನನ್ನೊಳು ನಿನ್ನದೇ ಭಾವಗೀತೆ

----------------------------------

ನೋಂದಣಿ ಐಡಿ : KPFS2-6439

5
Votes
149
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top