Submission 2196

ಪಾತರಗಿತ್ತಿ

ರಚನೆ : ಲಕ್ಷ್ಮಿ ಹರಿಹಳ್ಳಿ

----------------------------------

ರಂಗು ರಂಗಿನ ಪಾತರಗಿತ್ತಿ ರಂಗೇರಿದೆ ನನ್ನೀ ಮನವು ನಿನ್ನ ಹಿಂದೆ ಸುತ್ತಿ ಯಾರು ಬಳಿದರು ನಿನಗೆ ಈ ಬಣ್ಣಗಳನು ಕಣ್ಣು ತುಂಬಿಕೊಂಡೆನು ನೋಡಿ ನಿನ್ನೀ ಅಂದವನು ದ್ರೌಪದಿಯ ಸೀರೆಯಿಂದ ನೀ ಬಂದೆ ಎಂಬುದು ಪ್ರತೀತಿ ಆದರೆ ಹೂವುಗಳಿಗೆ ನೀ ನಲ್ಮೆಯ ಅತಿಥಿ ಭಾದ್ರಪದ-ಆಶ್ವಯುಜದಲಿ ನೀ ಬರುವೆ ಹೆಚ್ಚು ನೀನೆಂದರೆ ನನಗೆ ಬಹಳ ಅಚ್ಚು-ಮೆಚ್ಚು

----------------------------------

ನೋಂದಣಿ ಐಡಿ : KPFS2-6441

0
Votes
99
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top