Submission 2192

ಜೀವನ

ರಚನೆ : ಇಂಚರ ಎಸ್

----------------------------------

ತಿರುವುಗಳೇ ತುಂಬಿರುವ ಈ ಪಯಣ, ಪ್ರತೀ ತಿರುವಿನಲ್ಲೂ ಇದೆ ಒಂದೊಂದು ತಲ್ಲಣ. ಆಕಾಶದೆತ್ತರ ಏರುವ ಆಸೆ, ಆದರೆ ಕೆಳಗೆ ಬೀಳುವೆನೆಂಬ ನಿರಾಸೆ . ಮುಂದಿನ ದಾರಿಗೆ ದೀಪವಾಗುತ್ತ, ಇಂದಿನ ಕ್ಷಣಗಳಿಗೆ ಕತ್ತಲೆಯಾದೆ. ತನ್ನವರ ಮೊಗದಲ್ಲಿ ನಗುವನ್ನು ತರಿಸಿದೆ, ಸ್ವಂತ ಕನಸುಗಳಿಗೆ ಪರದೆಯೆನ್ನು ಹಾಸಿದೆ . ಕಷ್ಟದಲ್ಲಿ ಸ್ತಂಭವಾಗಿ ನಿಂತ ಸ್ನೇಹಿತರು, ದುಃಖದ ಹಾದಿಯಲ್ಲಿ ಜೊತೆಯಾಗಿ ಸಾಗಿದರು, ಭೇಟಿಯಾದ ಪ್ರತಿಯೊಬ್ಬರೂ ಗುರುಗಳಾದರು. ಪ್ರತೀ ಕ್ಷಣವೂ ಕಲಿಸುವುದು ಒಂದೊಂದು ಪಾಠ ಇದುವೇ ಆ ಪರಮಾತ್ಮನ ಜೀವನವೆಂಬ ಆಟ||

----------------------------------

ನೋಂದಣಿ ಐಡಿ : KPFS2-6438

2
Votes
114
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top