ಆಕರ್ಷಣೆ
ರಚನೆ : ಪ್ರಭಾವತಿ ಅಪ್ಪಾಗೋಳ
----------------------------------
ಮೊದಲ ಸ್ಪರ್ಶ ಮುದನೀಡಿದ ಗಳಿಗೆ, ನಿನ್ನೆದೆಗೆ ನಾ ಒರಗಿ ನಿಂತಾಗ ಬಾಹುಬಂದನದಿ, ಬಿಗಿದಪ್ಪಿ ಮುತ್ತೊಂದ ನೀಡಿದಾ ಗಳಿಗೆ, ಹಿಂದೆ ಸರಿಯಲು ನನ್ನ ಕಾಲುಗಳೇ ನನ್ನನ್ನು ನಿರಾಕರಿಸಿ ನಿಂತಿವೆ ನಿನ್ನೊಲವಾ ಸೆಳೆತಕ್ಕೆ ಸಿಕ್ಕು ... ಮುಚ್ಚಿದ ರೆಪ್ಪೆ ಹೇಳುತ್ತಿವೆ ಹೀಗೆ ಇರು ಎಂದು, ಓಡುತಿರಲು ನನ್ನೆದೆಯ ಬಡಿತ ನೀನೇ ಹೊಣೆಗಾರನೆಂದು!!
----------------------------------
ನೋಂದಣಿ ಐಡಿ : KPFS2-6184