ಅವನು...
ರಚನೆ : ಚೈತ್ರ ಅಂಗಡಿ
----------------------------------
ಅವನೆಂದರೆ ಕೈಗೆಟುಕದ ನಕ್ಷತ್ರ, ಅವನೆಂದರೆ ನನಸಾಗದ ಕನಸು, ಅವನೆಂದರೆ ಮಾಸಿ ಹೋಗದ ನೆನಪು, ಅವನೆಂದರೆ ಕಲ್ಪನಾ ಲೋಕದ ಜೀವದ ಗೆಳೆಯ, ಅವನೆಂದರೆ ಹುಚ್ಚುಪ್ರೀತಿಯ ಅರ್ಥ ತಿಳಿದರು, ತಿಳಿಯದಂತೆ ನಟಿಸುವ ಕಲಾವಿದ.. ಅವನೆಂದರೆ ಮರಳು ಪ್ರದೇಶದಲ್ಲಿ ಸುರಿಯುವ ಸೋನೇಯಂತೆ, ಅವನೆಂದರೆ ಕಪ್ಪೆಚಿಪ್ಪಿನಲ್ಲಿ ಅಡಗಿ ಕೂತ ಮುತ್ತಿನಂತೆ, ಅವನೆಂದರೆ ವಾಸಿಯಾಗದ ಹಿತವಾದ ನೋವು....
----------------------------------
ನೋಂದಣಿ ಐಡಿ : KPFS2-6082