ಕುಡಿ - ನುಡಿ
ರಚನೆ : ಸುಮಾ ಧಾರವಾಡ
----------------------------------
ಓ ನನ್ನಯ ಕುಡಿ ಬಾ ನನ್ನೋಡಗೂಡಿ ಆಡುವ ಜೊತೆ ಕೂಡಿ ನಾ ಕಲಿಸುವೆ ಕನ್ನಡ ನುಡಿ //೧// ನಿನ್ನ ನುಡಿಯು ಕೇಳಲು ತಂಪು ಅದರಲ್ಲೂ ಕನ್ನಡವು ಇನ್ನೂ ಇಂಪು ಅದು ನಿನ್ನ ತನುಮನದಲ್ಲಿ ಇರಲಿ ಎಂದೆಂದೂ ಹರುಷವ ತರಲಿ//೨// ನೀನಾಗು ಕನ್ನಡದ ಒಲುಮೆ ಬೆಳಗುತಿರು ನಾಡಿನ ಚಿಲುಮೆ ಸದಾ ನಿನ್ನ ಹರಿಸುವೆ ಇಂದು ತಾಯ್ನಾಡಿಗೆ ಹೆಸರು ನೀ ತರು ಎಂದೆಂದೂ//೩//
----------------------------------
ನೋಂದಣಿ ಐಡಿ : KPFS2-6083