ಮತದಾನ (ಇಂದೂ, ಮುಂದೂ, ಎಂದೆಂದೂ)
ರಚನೆ : ಸೂರಜ್ ಕಶ್ಯಪ್
----------------------------------
ಅಭಿವೃದ್ಧಿಯ ಗಾನ, ಆಡಂಬರದ ಸನ್ಮಾನ ನಾಗರೀಕ ಮೌನ, ಭ್ರಷ್ಟರಿಗೆ ಆಹ್ವಾನ | ಮುರು ಕಾಸಿಗೆ ಹೋದ ಮಾನ ಜನರ್ಯಾಕೋ ತೋರುತ್ತಿರುವರು ಅಂಧಾಭಿಮಾನ ||1|| ಚಂಚಲೆಯ ಚಾಪಲ್ಯದಲ್ಲಿ, ಭರವಸೆಯ ವಾಗ್ದಾನದಲ್ಲಿ | ಬಾಡೂಟದ ಭರದಲ್ಲಿ, ಜರುಗಲು ಮತದಾನ ಖಾಕಿ ಕಣ್ಗಾವಲಿನಲ್ಲಿ ||2|| ಕಾದು ನೋಡುವ ಫಲಿತಾಂಶಕ್ಕೆ ಚಾಣಾಕ್ಷನ ಪಟ್ಟಾಭಿಷೇಕಕ್ಕೆ | ಆಶಿಸುವುದೊಂದೇ ಒಳ್ಳೆಯ ಆಡಳಿತಕ್ಕೆ ದೇವರೇಬಲ್ಲ ರಾಜನಾರು ಈ ಪೀಠಕ್ಕೆ ||3||
----------------------------------
ನೋಂದಣಿ ಐಡಿ : KPFS2-6081