ನನ್ನ ಗೀತೆ
ರಚನೆ : ನಯನಾ ಹೆಗ್ಡೆ
----------------------------------
ಬರೆಯಬೇಕು ನಾನೊಂದು ಭಾವಗೀತೆ ನಾ ಕಾಲವಾದರೂ ನನ್ನೆಲ್ಲ ಮರೆತರೂ, ಪಲ್ಲವಿಸುತಿರಬೇಕು ಮತ್ತೆ ಮತ್ತೆ ..|| ಜಗದೆದೆಗೆ ತಂಪೆರೆವ ಸೋನೆಯಂತೆ ಕಂಡೊಡನೆ ಮನ ತಣಿಸೋ ಹಸಿರಿನಂತೆ ಕಡಲೆಡೆಗೆ ಜಾರುತಿಹ ಜಲ ವರ್ಣದಂತೆ ಮುದ ಬೀರುತಿರಲಿ ನನ್ನ ಗೀತೆ; ಅಳುತಲಿಹ ಕೂಸಿಗೆ ಲಾಲಿಯಂತೆ ಅರಳೋ ಮನಸುಗಳ ಕನಸಿನಂತೆ ಅಂತರಾತ್ಮವನರಿತು ಸಂತಹಿಸುವಂತೆ ಭಾವಗಳ ಸಂಧಿಸಲಿ ನನ್ನ ಗೀತೆ; ದಣಿವಷ್ಟು ಕೇಳಿದರೂ ದಣಿಸದಂತೆ ಮರೆತೆನೆಂದರೂ ಉಳಿದ ನೆನಪಿನಂತೆ ಮಥಿಸಿದಂತೆಲ್ಲ ಸಿಕ್ಕ ಹೊಸ ಮನನದಂತೆ ಅನುರಣಿಸುತಿರಲಿ ನನ್ನ ಗೀತೆ;
----------------------------------
ನೋಂದಣಿ ಐಡಿ : KPFS2-6043