ನೀ ಕಾಡುವ ಪರಿ..
ರಚನೆ : ಲೀಲಾ. ಜಿ. ಎಂ.
----------------------------------
ಮುಂಜಾನೆಯ ಬಿಸಿಲಿಗೆ ಮುಖವಿರಿಸಿದಾಗ ಕಣ್ಣಿಗೆ ಸೂರ್ಯನೇ ಕಾಣನು ನನಗೆ ನೀನೇ ಇಣುಕಿದಂತಿರುವೆ ಮೆಲ್ಲಗೆ ಮುಸ್ಸಂಜೆಯಲಿ ಸುಮ್ಮನೆ ನಾ ನಡೆಯುತಿರಲು ಗುಮ್ಮನೆ ಮನಸು ಗುಯ್ ಗುಟ್ಟಿದೆ ನೆನೆದು ನೀ ನಾಡಿದ ಮಾತನೆ ನೀ ನನ್ನ ಕಾಡುವ ಪರಿಗೆ ನಾ ಸಿಲುಕಿದಂತಿರುವೆ ಸುಳಿಗೆ ಹೇಳು ನೀ ಸರಿಸಿ ಇದನೆಲ್ಲ ಮರೆಗೆ ಬಂದು ನಿಲ್ಲುವುದು ಯಾವಾಗ ಜೊತೆಗೆ.
----------------------------------
ನೋಂದಣಿ ಐಡಿ : KPFS2-6042