Submission 1479

ಪುಸ್ತಕ — ಜ್ಞಾನದ ದೀಪ

ರಚನೆ : Pavan k n

----------------------------------

ಜ್ಞಾನ ಸಾಗರದ ಮುತ್ತು ಪುಸ್ತಕ, ಮನದ ಬೆಳಕಿನ ದಾರಿ, ಅಕ್ಷರಗಳಲಿ ಮಿನುಗುತಿದೆ, ನಿತ್ಯದ ಜ್ಞಾನ ವಾರಿ. ಮೌನದಲಿ ಮಾತನಾಡುವ ಶಬ್ದರಹಿತ ರಾಗ, ಬಾಳ ಹಾದಿಯಲಿ ತೋರುವದು ಸತ್ಯದ ಅಮೃತ ಭಾಗ. ಒಂದು ಪುಟ ತಿರುಗಿಸಿದರೆ ಸಾವಿರ ಕನಸುಗಳು ಮೂಡುತ್ತವೆ, ಅಜ್ಞಾನದ ಕತ್ತಲು ಕರಗಿ, ಜ್ಞಾನ ಸೂರ್ಯೋದಯ ಆಗುತ್ತವೆ. ದುಃಖದ ಹೊತ್ತಿನಲಿ ತೋರುವದು ಸ್ನೇಹದ ನಾದ, ಪುಸ್ತಕವೇ ಬದುಕಿಗೆ ನೀಡುವ ಶಾಶ್ವತ ಸಾಧ. ಓದಿದಷ್ಟೂ ಬೆಳೆಯುತ್ತದೆ ಮನದ ಹೂಗಿನ ಪರಿಮಳ, ಪುಸ್ತಕವೇ ಜೀವನದ ನಿತ್ಯದ ಪ್ರಭಾತ, ಅಮೃತದ ಕಿರಣ.

----------------------------------

ನೋಂದಣಿ ಐಡಿ : KPFS2-6040

4
Votes
128
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top