ನೆನಪು
ರಚನೆ : ನಂಜುಂಡ ಸ್ವಾಮಿ
----------------------------------
ಗೀಚುವುದೊಂದೇ ಕೆಲಸವಾಗಿದೆ ನನಗೀಗ, ಆಕೆಯ ನೆನಪುಗಳ ನೆನೆದು... ಒಂದು ಕ್ಷಣ ನೆನಪಾದರೆ ಸಾಕು, ಕಣ್ಣೀರ ಧಾರೆ ಉಕ್ಕುವುದು ಬೋರ್ಗರೆದು... ಬಹುಶಃ ನಯನಗಳು ಬರಡಾದವೋ ಏನೋ ? ಕಂಬನಿಯ ಬದಲಿಗೆ ಪದಗಳ ಜೋಡಿಸಿ, ಪೋಷಿಸಿದ್ದ ನೆನಪುಗಳನ್ನು ಪದವಾಗಿ ರೂಪಿಸಿ, ಪದಗಳಲ್ಲಿ ನೆನಪುಗಳ ಕೂಡಿಸಿ, ನೆನಪನೊತ್ತ ಪದಗಳನ್ನು ಕ್ರಮವಾಗಿ ಪೋಣಿಸಿ, ಈ ಅನುಭವಿಯ ನೋವನ್ನ ಖಾಲಿ ಹಾಳೆಗಳಲ್ಲಿ ಉಲ್ಲೇಖಿಸಿ, ಓದಿದವರ ಮನದಲ್ಲಿಯೂ ಕೂಡ ಆಕೆಯ ನೆನಪುಗಳನ್ನು ಉಳಿಸಬೇಕೆನಿಸಿದೆ...!
----------------------------------
ನೋಂದಣಿ ಐಡಿ : KPFS2-6020