Submission 1451

ಉಡುಗೊರೆ

ರಚನೆ : Sujan S

----------------------------------

ದೂರದಲ್ಲೊಂದು ತೀರ ತೀರದ ಆಚೆಯೊಂದು ಲೋಕವು ನಿನಗಾಗಿ ಕಾದಿಹುದು ಸುಂದರ ಬದುಕೊಂದು ನಿನಗಾಗಿ ನೀಡಲು ಉಡುಗೊರೆ... ನಿನಗಾಗಿ ಸೃಷ್ಟಿಸಿದ ಲೋಕವದು ಅಲ್ಲಿಲ್ಲ ಪ್ರೀತಿಯ ಕೊರತೆ ಜಗದ ಎಲ್ಲಾ ಖುಷಿಯನ್ನು ಬಂದಿಸಿ ಅಲ್ಲಿಟ್ಟಿರುವೆನು ನಿನಗಾಗಿ ನೀಡಲು ಉಡುಗೊರೆ... ಬರೀ ನಾಲ್ಕು ಗೋಡೆಗಳ ಕೋಟೆಯಲ್ಲ ಸಂಭ್ರಮ ಸಡಗರಗಳಿಗೇನು ಕೊರತೆ ಅಲ್ಲಿಲ್ಲ ನಿನ್ನ ಪಾದ ಸ್ಪರ್ಶದಿಂದ ಪಾವನವಾದಿತು ಬಂದೊಮ್ಮೆ ಪಾವನಗೊಳಿಸು ನಿನಗಾಗಿ ಕಟ್ಟಿದ ಪ್ರೇಮದ ಗೂಡಿದು ನಿನಗೆ ನೀಡಲು ಉಡುಗೊರೆ...

----------------------------------

ನೋಂದಣಿ ಐಡಿ : KPFS2-6017

25
Votes
241
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top