ಪರಾವಲಂಬನೆ
ರಚನೆ : ಡಾ. ಅನುಪಮಾ ಜಿ.ಎಲ್
----------------------------------
ಮಂಜಿನ ಹನಿಯದೋ ಜೋಳದ ತೆನಿ ಮ್ಯಾಲೆ ನೇಸರನ ಕಿರಣವದೋ ಮಂಜಿನ ಹನಿಮ್ಯಾಲೆ ಕಪ್ಪು ಮಣ್ಣಿನ ಕಣವದೋ ಕಾದಿಹುದು ಮಾಡಿ ಕಣ್ಣಮ್ಯಾಲೆ ಮರುಗಿದ ಹಿಮವದೋ ಸುರಿದಿಹುದು ಭುವಿಯ ಮ್ಯಾಲೆ ಹತ್ತಿಯ ಹೂವದೋ ಕುಡಿವಡೆದಿಹುದು ರವಿಯ ಕಾದು ಕಂಬಳಿಯ ಹುಳವದೋ ಕುಳಿತಿಹುದು ಹೂವ ಕಾದು ಜಾಲಿ ಮ್ಯಾಲಿನ ಗುಬ್ಬಿಯದೋ ಹೊಂಚಾಕಿಹುದು ಹುಳವ ಕಾದು ಇದ ನೋಡಿದ ಮೇಘನೋ ಮುಸುಕಿಹನು ಭಾಸ್ಕರನನೇ ಕಾದು ಹಸಿರ ಹಾಸನು ನೋಡಿ ತಣಿದಿಹುದು ಕಿರಿಯ ಮನಸು ಫಸಲ ಹಸನಾಗಿ ನೋಡಿ ಕುಣಿತಿಹುದು ಹರೆಯ ಮನಸು ಎಲ್ಲವ ಸಫಲಾಗಿ ನೋಡಿ ನಿಟ್ಟುಸಿರು ಬಿಡುತಿಹುದು ಹಿರಿ ಮನಸು ಇದೆಲ್ಲವ ನೋಡಿ ನಗುತಿಹುದು ಹರಿಯ ಮನಸು ಜಗದ ನಿಯಮವ ಮೀರಿ ನಡೆವುದಾದರೂ ಏನು ಎಲ್ಲವ ನಡೆಸುವ ಸೂತ್ರಧಾರನೋ ಹರ ನೀನು ನಿನ್ನ ಸೂತ್ರವಿಡಿದು ನಡೆವೆ ನಿನ್ನ ಸೇರಲು ನಾನು
----------------------------------
ನೋಂದಣಿ ಐಡಿ : KPFS2-2386