Submission 7432

ಜೀವನ ಚಕ್ರ

ರಚನೆ : ಗುರುಪ್ರಸಾದ ತಾಡಪತ್ರಿ

----------------------------------

ಕಾಣದ ಕರ್ಮವು ಕೈ ಹಿಡಿದು ನಡೆಸುತಿರಲು ಜೀವನವ, ಅದನಲ್ಲಗಳೆದು ತನ್ನಿಚ್ಛೆಯಂತೆಯೇ ಬಾಳುವೆನೆಂದನು ಮಾನವ ಅಪ್ಪ ಅಮ್ಮನಿಂದ ದೇಣಿಗೆ ಪಡೆದರೂ ಈ ಜನ್ಮವ, ಅಸ್ಮಿತೆಯಿಂದ ವಿಭಿನ್ನನಾಗುವೆನೆಂದನು ಮಾನವ ಬೇಕು ಬೇಡಗಳ ಸಂಕೋಲೆಯಲಿ ಸಿಲುಕಿ ಬಳಲಿದವ, ಪ್ರೀತಿಯ ಪರಿಭಾಷೆಯ ಹುಡುಕುತಿರುವನು ಮಾನವ ಯಶಸ್ಸು ಸಂಪತ್ತು ಮನ್ನಣೆಯೇ ಜೀವನವೆಂದವ, ಮಕ್ಕಳಲ್ಲಿ ತನ್ನ ಜೀವನ ಕಾಣುತಿರುವನು ಮಾನವ ನೋವು ಹತಾಶೆಯ ಉಳಿಪೆಟ್ಟಿಗೆ ಚೂರಾದವ, ಪ್ರಬುದ್ಧತೆಯ ಮೂರ್ತಿಯಾಗಲಿಲ್ಲ ಮಾನವ ಸಿಗಲಾರದ್ದು ಅಪಾರವೆಂದು ಕೊರಗಿ ಮೊರೆಯಿಟ್ಟವ, ಸಿಕ್ಕಿದ್ದನ್ನೂ ಬಿಟ್ಟು ಹೊರಟಿರುವನು ಮಾನವ ಕರ್ಮವು ಗೆದ್ದು ನಸುನಗಲು ಕೊನೆಗೆ, ಬಿಟ್ಟನವನು ದೇಹವ, ಇನ್ನೊಂದು ಜನುಮಕ್ಕಾಗಿ ಬೇಡಿದನು, ಮತ್ತೆ ಆಗಲು ಮಾನವ

----------------------------------

ನೋಂದಣಿ ಐಡಿ : KPFS2-2383

23
Votes
245
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top