ಮೌನ ಮಾತಾದಾಗ
ರಚನೆ : ಮನೋಹರ್ ಶಿವರಾಜ್ ಆರಾಧ್ಯ
----------------------------------
ಅವಳೇನು ನನ್ನ ಪ್ರೇಯಸಿ ಅಲ್ಲ, ಒಟ್ಟಿಗೆ ಸಮಯ ಕಳೆದವರಲ್ಲ ಅವಳ ಮೇಲೆ ಇರುವ ಪ್ರೀತಿ ಶಾಶ್ವತ ಅಂತ ಗೊತ್ತಿಲ್ಲ ಪ್ರೀತಿ ಗೆಳೆತನ ಮಧ್ಯೆ ಬೆಳೆದ ಅಪರೂಪದ ಅನುಭವ ನಮಗಿಲ್ಲ ಆದರೂ ಈ ಮನಸು ಯಾಕೋ ಮಿಡಿಯುತಿದೆಯಲ್ಲ ಬರವಸೆ ಕೊಟ್ಟು ಮಾಡುವ ಪ್ರೀತಿ ನನ್ನದಲ್ಲ ಅವಳ ಪ್ರೀತಿಗೆ ಮೋಸ ಮಾಡುವ ಮನಸು ನನಗಿಲ್ಲ ಮುಚ್ಚಿಟ್ಟ ಪ್ರೀತಿಯ ಬಿಚ್ಚಿಡಲೇ ಇಲ್ಲಾ ಗೆಳೆತನದ ನೆರಳಲ್ಲಿ ಬದುಕಿ ಬಿಡಲೇ ಆದರೂ ಈ ಮನಸು ಯಾಕೋ ಮಿಡಿಯುತಿದೆಯಲ್ಲ ನಾ ನಿನ್ನ ಪ್ರೀತಿಸಿದ್ದು ಸುಳ್ಳುಲ್ಲ ಆ ಪ್ರೀತಿಯ ಭಾವನೆ ನಿನಗೆ ತಿಳಿಯದೆ ಹೋಯಿತಲ್ಲ ನಕ್ಕ ಹಾಗೆ ನಟಿಸಿ ಭಾವನೆಯ ಸುಳಿಯಲ್ಲಿ ಬಿಟ್ಟು ಹೋದೆಯಲ್ಲ ನನಗರಿವಿಲ್ಲದೆ ನಿನ್ನ ಕಳೆದುಕೊಂಡೆ ಎಂಬ ಭಾವನೆ ನನ್ನದಾಯಿತು ಅಲ್ಲ ಮೌನ ಮಾತಾದಾಗ ನೆನಪುಗಳು ಅರಿವಿಗೆ ಬಂದು ಹೋಯಿತಲ್ಲ
----------------------------------
ನೋಂದಣಿ ಐಡಿ : KPFS2-2350