Submission 7382

ಮಡದಿ

ರಚನೆ : ಎಸ್.ಎಲ್ ವರಲಕ್ಷ್ಮೀ ಮಂಜುನಾಥ್

----------------------------------

ಪ್ರೀತಿ ಪ್ರೇಮದಿ ಮಿಂದು ಒಂದಾದೆವಂದು ಬಡತನಕು ಸಿರಿತನಕು ಸವೆದ ಹಾದಿ ಕನಸು ಮುನಿಸುಗಳ ಸೈರಿಸಿದ ಮಡದಿ ಒಲುಮೆ ಕಾಯಿ ಮಾಗಿ ಹಣ್ಣಾಗಿದೆಯಿಂದು ಕೊರಳ ಕರಿಮಣಿಗೆ ಬಾಗಿದೆ ನಿನ್ನೆದೆ ಗೂಡು ಹಗಲಿರುಳು ತನ್ನವರ ಹಿತಕಾಗಿ ಮಿಡಿದಿದೆ ಅಂದ ಚಂದವು ಒಲೆಯ ಮುಂದೆ ಬೆಂದಿದೆ ತಾಳತಂಬೂರಿಗಳಿಲ್ಲ, ಹೊಮ್ಮಿದೆ ಬಾಳಹಾಡು ಸರಿದ ಮುಂಗುರುಳ ಬದಿಗೆ ಸರಿಸಿ ನಿಂತಿದೆ ಪ್ರೇಮ ಕಾರುಣ್ಯಗಳ ಮೂರ್ತಿ ಸಹನೆ ಸೇವೆಗೆ ಮೀಸಲಾಗಿದೆ ಜೀವ ಪೂರ್ತಿ ನಡುವಿಗೆ ಸೀರೆ ಸೆರಗ ಭರದಿ ಸಿಕ್ಕಿಸಿ ನನ್ನೊಲವೆ ಬಾರೆ,ಸೇವೆಗೈಯುವೆ ಅರೆಘಳಿಗೆ ನೀನಿಲ್ಲದೇನು ಸಗ್ಗದಮೃತವೂ ನಾ ಮಾಣೆ

----------------------------------

ನೋಂದಣಿ ಐಡಿ : KPFS2-2349

0
Votes
92
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top