Submission 7378

ತೇಜಸ್ಸು

ರಚನೆ : ಪ್ರಮೋದ ತಾಡಪತ್ರಿ

----------------------------------

ವದನದ ತೇಜಸ್ಸು ಆಂತರ್ಯದ ಬಿಂಬವೋ ಸೂರ್ಯನ ಕಿರಣಗಳ ಪ್ರತಿಬಿಂಬವೋ ಒಳಗಿನ ಜ್ವಾಲೆಯ ಜೊತೆ ಸೂರ್ಯನು ಸೇರಿದರೆ ಕಾಣುವ ಬೆಳಕೇ ತೇಜವೇ! ಕಾಣುವುದೆನ್ನುವುದು ಹೊರಗಣ್ಣ ಭ್ರಾಂತಿಯೇ? ಅದೊಂದು ಆಂತರ್ಯದ ಅನುಭೂತಿಯೇ! ಕತ್ತಲಲ್ಲಿ ತೇಜಸ್ಸು ನೋಡಲಾಗುವುದೇ? ಜ್ವಾಲೆ ಒಳಗಿರಲು ನೋಟ ಹೊರಗೇಕೇ! ದೀಪದ ಬುಡದಲ್ಲಿ ಕತ್ತಲಿರುವ ಹಾಗೆಯೇ ಕಣ್ಣಿಗೆ ಕಾಣುವುದೆಲ್ಲ ಬರೀ ಅಂಧಕಾರವೇ ಒಳಗಿನ ಜ್ಞಾನಜ್ಯೋತಿ ಬೆಳಗಿದೊಡನೇ ಹೊರಗಣ್ಣಿಗೆ ಕಾಣುವ ಬೆಳಕು ಅವಶ್ಯಕವೇ?

----------------------------------

ನೋಂದಣಿ ಐಡಿ : KPFS2-2347

32
Votes
224
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top