Submission 7324

ಅಮ್ಮನೆಂದರೆ ಸಾಕೇ

ರಚನೆ : ಸುಜಾತಾ ಕೆ.ಎಸ್.

----------------------------------

ಮಗುವಿನಂತೆ ಬೆಚ್ಚಗಿರಲು ನನಗಾಸೆ ನನ್ನಮ್ಮನ ಮಡಿಲಲಿ ಮಲಗುವಾಸೆ ಚಾಚಿದ ಕೈಗಳಿಂದ ತಬ್ಬಿಕೊಳ್ಳುವಾಸೆ ||ಮಗು || ಇಂದಿಗೂ ಎಂದಿಗೂ ಹಾರೈಸುವ ತಾಯಿ ಬೆನ್ನಿಗೆ ನಿಂತು ಬೆಂಬಲಿಸುವ ಮಹದಾಯಿ ಹೆಣ್ಣು ಮಕ್ಕಳೆಂದು ಕಡೆಗಣಿಸದೆ ಸಾಕಿದ ಶಾಂತಮಯಿ ||ಮಗು|| ಪ್ರತಿ ಪ್ರಯತ್ನದಲ್ಲೂ ಹುರಿದುಂಬಿಸುವಾಕೆ ಮೊಮ್ಮಕ್ಕಳಿದ್ದರೂ ಮಗಳದು ಎನ್ನುವಾಕೆ ಇಂಥಾ ಪ್ರೀತಿಯ ಮುಂದೆ ಬೇರೆಲ್ಲಾ ಏಕೆ ||ಮಗು || ಸಾಕಲು ಯಾರನ್ನು ಕಾಡಿಲ್ಲ ಬೇಡಿಲ್ಲ ಮಕ್ಕಳು ನೌಕರರೆಂದು ಹಮ್ಮು ಇಲ್ಲವೇ ಇಲ್ಲ ಅವಳ ಮಹಿಮೆಯ ದೇವರೇ ಬಲ್ಲ ||ಮಗು ||

----------------------------------

ನೋಂದಣಿ ಐಡಿ : KPFS2-2310

0
Votes
98
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top