Submission 7300

ಮೌನ ಧರಣಿ

ರಚನೆ : ಕುಸುಮಾ ಯೋಗೇಶ್

----------------------------------

ವರ್ಷಧಾರೆಗೆ ಮೈಯೊಡ್ಡಿ ನಿಂತ ತರುಗಳೇ ನಿಮ್ಮ ತಂಪು ಕಂಪನ್ನುಟ್ಟ ನಾನೇ ಈ ಇಳೆ, ನಿಮ್ಮ ಹಸಿರು ಉಸಿರ ಬಲೆಯಲಿ ನಾ ಕ್ಷೇಮ ಸಕಲಕ್ಕೂ ನಾನೆರೆವೆ ನವಿರಾದ ಪ್ರೇಮ ಏನಿದು ನನ್ನನ್ನೇ ನಡುಗಿಸುವ ಗದ್ದಲ!? ನನ್ನ ಮೇಲೆ ಮುರಿದು ಬೀಳುತ್ತಿವೆ ಮರಗಳು ಉದುರಿದವು ಗುಟುಕು ಕಾದಿದ್ದ ಮರಿಗಳು ಮಾನವ! ನನ್ನಸಿರ ಕಡಿದು ಕಟ್ಟಿದೆ ಮಹಲು ಉರಿಯುತಿದೆ ಬರಿದಾದ ನನ್ನ ಮೈ, ಒಡಲು ಶಾಂತಳಾಗಿ ಶರಣಾದೆ ನಿನ್ನ ಮುಂದೆ ಈಗ, ಹೊತ್ತಿ ಉರಿಸು! ಕಾಯುತಿರುವೆ ನಿನ್ನ ಪರಮಾವಧಿ, ನನ್ನೊಡಲ ಉರಿ, ಕಣ್ಣೀರ ಕಡಲು ಮಾಡುವುವು ಮನುಕುಲ ಸಮಾಧಿ!

----------------------------------

ನೋಂದಣಿ ಐಡಿ : KPFS2-2284

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top