Submission 7292

ಖೈದಿ

ರಚನೆ : ಶ್ರೀರಕ್ಷಾ ಭಟ್ಟ

----------------------------------

ಬದುಕಿನ ಬಂಧದೊಳಗೆ ಬಂಧಿಯಾಯಿತೇ ಮನವು? ಕನಸ ರಾಶಿ ಕೆದಕಿ ನಿಲ್ಲಲು ಸಿಕ್ಕೀತೇ ಗೆಲುವ ಛಲವು! ಅದನನುಸರಿಸಿದ ಮನಕೆ ಬಂದೀತೇ ಬದುಕ ಬಲವು! ಆದರೂ ಅದರೊಳು ನುಸುಳಿ ಹೋಯಿತೇ ಒಲವು! ಕಪಟ ಜಗದಿ ಹುದುಗಿಹೋಗಲಾರದೇ ನಡುಗಿ! ಜೇಡರ ಬಲೆಯೊಳು ಸಿಕ್ಕಿಕೊಂಡ ಜೇಡರವಾಗಿ, ಕನಸ ಕದ ತೆರೆಯುವಾಗಲೇ ಕೈ ಸಿಲುಕಿ ಹೋಗಿ, ಮನಸ ಮಾತಾಡಿಸದೇ ಕಣ್ಮುಚ್ಚಿ ಹಿಂದೆ ತಿರುಗಿ, ಹುಚ್ಚು ಹೊಳೆಯೆಂಬ ಕೋಡಿಯಲಿ ನಾ ಹರಿದೆ, ಬಿಚ್ಚು ಮನವ ಮಾತಾಡಿಸಿ ನಾ ಸೋತುಹೋದೆ! ಕಾದ ಕೆಚ್ಚೆದೆಯ ಕಡಲಲ್ಲಿ ನಾ ಮುಳುಗಿಹೋದೆ! ನಿನ್ನ ನೆನಪೊಳು ಸಿಕ್ಕ ನಾ ನನ್ನಲ್ಲೆ ಖೈದಿಯಾದೆ.

----------------------------------

ನೋಂದಣಿ ಐಡಿ : KPFS2-2279

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top