Submission 7228

ರಾಗ ಯೋಗದ ಸುದಿನ

ರಚನೆ : ಪಂಚಾಕ್ಷರಿ ಹೀರೆಮಠ

----------------------------------

ರಾಗ ಯೋಗ ವಿಶ್ವದ ಒಂದೆ ನಾಣ್ಯದ ಎರಡು ಮುಖಗಳು l ದೈಹಿಕ ಮಾನಸಿಕ ಆರೋಗ್ಯಕ್ಕೆ ಸದಾ ಸಹಕಾರಿಗಳು l ಉತ್ತಮ ಬೆಳವಣಿಗೆ ಶಾಂತಿ ತಾಳ್ಮೆ ಯೋಗದ ಸಂಕೇತಗಳು l ಆತೋದ್ಧಾರದ ಸಾಕ್ಷಾತ್ಕಾರ ಸಾಧನೆಗೆ ಸಂಗೀತ ರಾಗಗಳು ll ವಿಶ್ವದೆಲ್ಲರ ಹೃದಯ ಗೆಲ್ಲುವ ಏಕೈಕ ಭಾಷೆಯೇ ಸಂಗೀತ । ಭಾಷೆಗಳಿಲ್ಲದೆ ಭಾವನೆ ಮೂಡಿಸುವ ವಿಶ್ವ ಭಾಷೆಯ ಸಂಗೀತ । ವಿಶ್ವ ಮಾನ್ಯತೆಯ ಪಡೆದ ಪರಂಪರೆ ಭಾರತಿಯ ಸಂಗೀತ । ವಿಶ್ವ ಕ್ಕೆ ಭಾರತಿಯರು ಕೊಟ್ಟ ಯೋಗ ರಾಗದ ಸಂಗೀತ ll ಭಾರತಕ್ಕೆ ಗುರುವಿನ ಸ್ಥಾನದ ವಿದ್ಯೆಯ ರಾಗ ಪದ್ಧತಿ । ಋಷಿ ಮುನಿಗಳಿಂದ ಆವಿಷ್ಕರಿಸಿದ ಯೋಗ ಪದ್ಧತಿ । ಯೋಗ ರಾಗ ಭಾವದಿಂದ ದೇಹಕ್ಕೆ ಸದ್ಧತಿ | ದೇಹ ಮನಸ್ಸುಗಳೆರಡೊಂದಿದ್ದರೆ ಯಶಸ್ಸಿನ ಏಕಾಗ್ರತೆ ॥

----------------------------------

ನೋಂದಣಿ ಐಡಿ : KPFS2-2225

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top