ಕವಲೊಡೆದ ಕನಸು
ರಚನೆ : ಚಂದನ ಕುಮಾರ್
----------------------------------
ಆ ಶಶಿಕಿರಣಗಳ ಸಿರಿಯ ಮಡಿಲಲ್ಲಿ ಬೆಳೆಯುವ ಆಸೆ ಇತ್ತು ನನ್ನಲ್ಲಿ ಆ ತಿಳಿಮೋಡಗಳ ಹಿತವಾದ ತೋಟಿಲಿನಲ್ಲಿ ಆಡುವ ಕನಸು ಹೊಮ್ಮಿತು ಮನಸಲ್ಲಿ ತೀರದ ಬಯಕೆಗೆ ಸಾವಿರ ಪುಟಗಳು ನನ್ನಲೆ ಅವಿತಿವೆ ಸುಂದರ ರೆಕ್ಕೆಗಳು ನಿಂತೆನು ಮರೆತು ನಾ ನನ್ನಯ ಹಿತನೆರಳು ನೋಡುತ ಅರಿತೆ ನಾ ಅವೆಲ್ಲಾ ಬರೀ ಕನಸುಗಳು ಹೆಜ್ಜೆಯೇ ಹೇಳಿದೆ ಆ ದಾರಿಯೂ ದೂರೆಂದು ಸಪ್ಪಳ ನುಡಿದಿದೆ ನಿನಗದು ಸಿಗದೆಂದು ಹುಡುಕುತ ಸಾಗಿಹೆ ಎಲ್ಲೆಡೆ ನಗುವೊಂದ ದಿನವು ನಾ ಏರಿಹೆ ನಗೆಯೆಂಬ ಸುಳ್ಳೊಂದ ತೋಳಲಿ ಜಿಗಿಯುವ ಆ ಎಳೆ ವಯಸಲಿ ಸೇರಿದೆ ಬೇರಾಗಿ ಖುಷಿಯಾದ ತೀರದಲಿ..!
----------------------------------
ನೋಂದಣಿ ಐಡಿ : KPFS2-2147