ನನ್ನಮ್ಮ ಡೇರೆಯ ಹೂ
ರಚನೆ : ಸುಷ್ಮಾ ಎನ್ ಎಂ
----------------------------------
ಆ ಹುಡುಗಿಯ ಕೈಯೊಳಗಿನ ಡೇರೆಯ ದಳಗಳಲ್ಲಿ ನನ್ನಮ್ಮನ ಕೈಕಾಲು ಕಣ್ಣುಗಳು ಕೊನರುತ್ತವೆ. ರಾಟೆಯನ್ನು ತುಳಿದು ಸೊಂಟದಿಂದ ಪಾದದವರೆಗೆ ಅಲ್ಲಲ್ಲಿ ಹೆಪ್ಪುಗಟ್ಟಿ ನಿಂತ ಪಾಚಿ, ಮೀನಖಂಡದೊಳಗೆಲ್ಲೋ ಕುಲುಮೆಯೊಳಗೆ ಕಾಯಿಸಿ ಬಡಿಸಿಕೊಂಡ ಬಿಳಿಯ ಹೂವು ಸೂಜಿಯ ಅಸುಪಾಸಿನಲ್ಲಿ ಪಾದರಸದಂತೆ ಹರಿದಾಡುವ ಬೆರಳುಗಳ ಆಳದಲ್ಲಿ ಅದೆಷ್ಟೋ ಬೇರು ಬಿಟ್ಟು ಕನಸುಗಳು. ಎಡಗಣ್ಣಿನೊಳಗೆ ಕತ್ತಲು, ಆದರೂ ದೃಷ್ಠಿ ನೇರವಾಗಿದೆ ಕೈಗಳೋ ಹಿಮದ ಮಹಾಶರಧಿ ಆಕಾಶವನ್ನೇ ಕಣ್ಣಲ್ಲೆ ಅಳೆದು ಕತ್ತರಿಸಿ ಹಣೆ ಬೆನ್ನು ಸೊಂಟದ ಬೆವರನ್ನೆಲ್ಲ ಹರಿಸಿ ನುಂಗಿ ನೊಣೆದು, ಹೊಲೆದು ನನ್ನಬೆದರು ಬೊಂಬೆಗೆ ಹಾಕಿ ದೃಷ್ಠಿ ಮುರಿಯುತ್ತಾಳೆ ತುಂಟಿಯಂಚಿನಲ್ಲೇ ನಗುತ್ತಾಳೆ ಅವಳ ಕಣ್ಣುಗಳು ಅರಳಿ ಮಿಂಚುತ್ತವೆ ಸದ್ದಿಲ್ಲದೇ ಮುಂಜಾವಿನಲ್ಲಿ ಅರಳುವ ಡೇರೆಯ ಹಾಗೆ
----------------------------------
ನೋಂದಣಿ ಐಡಿ : KPFS2-2139