Submission 7106

ಅಳಬೇಡ ಓ ಮನವೇ!

ರಚನೆ : ಮನೋಜ್. ವಿ

----------------------------------

ಅಳಬೇಡ ಓ ಮನವೇ.. ಯಾರೂ ಇಲ್ಲವೆಂದು ಕೊಲಬೇಡ ನಯನವ ಕಣ್ಣಿರಲಿ ಮಿಂದು. ಅವಿತು ಕುಳಿತಿದೆ ಒಂದು ಹೃದಯ ಸ್ಪಂದಿಸಲು ಯಾವುದೋ ಕೋಣೆಯಲಿ ಕದ ಬಡಿದು ಕರೆದಾಗ ಹುಡುಕಿ ಹೊರಡುವುದು ನೌಕೆಯಲಿ. ಹೋಗು ಮನವೇ ಹೋಗು ಮನಬಿಚ್ಚಿ ಮಾತಾಡು, ಎಲ್ಲಾ ಬೇಲಿಯ ಕಿತ್ತು ಹಾಯಾಗಿ ನೀ ಹಾಡು. ನಿನ್ನ ಹಾಡ ರೀತಿಗೆ, ನಿನ್ನ ಮನದ ಪ್ರೀತಿಗೆ ಸಿಗುವುದು ನಿನಗೂ ಇತರ ಹೃದಯಗಳ ಅಪ್ಪುಗೆ. ಜೊತೆಗೂಡಿ ನಲಿದು, ಹಳೆಯದೆಲ್ಲವ ಮರೆತು ಸಂಭ್ರಮಿಸು ಓ ಮನವೇ ನಿನ್ನ ನೀ ಅರಿತು. ನೀನು ಎಲ್ಲರ ಹಾಗೆ, ಬರುವೆ ಎಲ್ಲರ ಮುಂದೆ ಗಳಿಸಿ ಕಳೆಯುವ ಈ ಆಟವ ನೋಡಲೆಂದೇ. ಮನಸ್ಪೂರ್ತಿ ಆಶಿಸುವೆ, ಮತ್ತೆಂದೂ ಅಳಬೇಡ ಓ ಮನವೇ.. ಯಾರೂ ಇಲ್ಲವೆಂದು..!

----------------------------------

ನೋಂದಣಿ ಐಡಿ : KPFS2-2138

0
Votes
119
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top