Submission 7094

ಸ್ವತಂತ್ರ ಭಾರತಿ

ರಚನೆ : ಕೀರ್ತಿ ಪ್ರಸಾದ್ ಆರ್

----------------------------------

ಭಾರತಾಂಬೆಯು ನಮ್ಮ ಭಾರತೀಯರಾ ಬೆಡಗು, ರಾಜ್ಯಗಳು ಹಲವಾರು ಆಕೆಯ ಸಂತತಿಯು | ಅಗಲಿರದ ಆ ನಮ್ಮ ತಾಯ್ದೇವಿ ಯಾರನ್ನು, ಸಲಹುತಿಹಳು ಸಕಲರನು ತಾರತಮ್ಯವ ತೊರೆದು ||೧|| ಬೀರೆ ಪರಕೀಯರಾ ದೃಷ್ಟಿ ಎನ್ನಮ್ಮ ಎನ್ಭೂಮಿಯಾ ಮೇಲೆ, ವಿಷಕಲಿಸಿದ್ಹೆಜ್ಜೇನ ಸವಿಸಿ ಬೇರ್ಪಡಿಸಿದರು | ನೋಡುತ್ತ ಎನ್ನಂಬೆ ಬಿರುಕು ತನ್ಮಕ್ಕಳಲಿ , ಸ್ತಬ್ದಳಾದಳು ನೆತ್ತರನು ಕಣ್ಣಲ್ಲಿ ಹೊತ್ತು ||೨|| ಜನಿಸಿದರು ಚೆನ್ನವ್ವ, ರಾಯಣ್ಣ, ಭಾರತಿಯ ಗರ್ಭದಲಿ, ಹಚ್ಚಿದರು ಸ್ವಾತಂತ್ರ್ಯದಾ ಹೊನ್ನ ಕಿಚ್ಚು | ದೇವರಲಿ ಮೊರೆಹೊಕ್ಕು ಬೇಡುವೆವು ನಾವಿಂದು, ಮುಂದೆಂದು ಮರುಕಳಿಸಲೆಣಿಸದಿಂಥಹಾ ತಪ್ಪು ||೩||

----------------------------------

ನೋಂದಣಿ ಐಡಿ : KPFS2-2127

0
Votes
92
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top