ಆಕಾಂಕ್ಷಿ
ರಚನೆ : ಚೈತ್ರಾ. ಕಬಾಡೆ.
----------------------------------
ಬೆಳಗಿನ ಸೂರ್ಯನಿಗಿಂತ ಮೊದಲೇ ಎದ್ದು, ರಾತ್ರಿಯ ತಾರೆಯ ಮಿಂಚಿನ ನಂತರ ಮಲಗಿ, ನಿಶ್ಯಬ್ದವಾದ ಕೋಣೆಯ ಒಂದು ಮೂಲೆಯಲ್ಲಿ, ನೂರಾರು ಪುಟಗಳ ಪುಸ್ತಕಗಳ ಮಧ್ಯೆ ಕೂತು, ಕಣ್ಣಲ್ಲಿ ಬೆಳಕು, ಮನಸಲ್ಲಿ ಚೇತನವ ಹೊತ್ತು, ನಿದಿರೆಯ ಬಾರದಷ್ಟು ಕನಸ್ಸನ್ನು ಹೊತ್ತು, ಛಲ ಬಿಡದೇ ಪರೀಕ್ಷೆಗಳ ಜೊತೆಗೆ ಹೋರಾಡುವ ಸೈನಿಕನೇ-"ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿ" ; ಪ್ರತಿಯೊಂದು ಪ್ರಶ್ನೆಯ ಆಳವನ್ನು ಅರಿಯುತ್ತಾ, ಸರಿ, ತಪ್ಪುಗಳ ನಡುವೆ ಸರಿ ಉತ್ತರ ಹುಡುಕುತ್ತಾ, ತಪ್ಪುಗಳಿಂದ ಕಲಿಯುತ್ತಾ , ಪ್ರಯತ್ನಗಳೆಡೆಗೆ ಸಾಗುತ್ತ, ತನ್ನ ಭವಿಷ್ಯದ ಜೊತೆಗೆ ಸಮಾಜದ ಒಳಿತಿಗೆ ಯೋಚಿಸುವ ಚಿಂತಕನೇ - "ನಮ್ಮ ಆಕಾಂಕ್ಷಿ".
----------------------------------
ನೋಂದಣಿ ಐಡಿ : KPFS2-2094