Submission 6968

ಮುಸ್ಸಂಜೆಯ ಗೆಳೆತನ

ರಚನೆ : ನಳಿನಿಶಿವಶಂಕರ

----------------------------------

ಗೆಳತಿ ನಿನ್ನ ಮೊದಲ ಸರತಿ ಕಂಡ ಘಳಿಗೆ ಮಳೆಯಿತ್ತು ಗುಡಿಯ ಒಳಗೆ ಶಾಂತ ಮೂರ್ತಿ ಶಿವನ ಧ್ಯಾನ ಕಂಡಿತ್ತು! ಕಣ್ಣು ಮುಚ್ಚಿ ಶಿವನ ನೆನೆದೆ ಇಲ್ಲ...ನೀನೇ ಕಂಡಿದ್ದೆ ಎಂಥ ಮಾಯೆ...ಏನು ಸೆಳೆತ ಕಣ್ಣು ಕಣ್ಣು ಕೂಡಿದಾಗ! ಮತ್ತೆ ಮತ್ತೆ ಕಳ್ಳ ನೋಟ ಇಬ್ಬರ ಮನದಲ್ಲೂ ಪುಳಕ ಮಳೆಗೆ ಧನ್ಯವಾದ...ನಮನ ಈ ಸಖ್ಯಕ್ಕೊಂದು ನೆವನ! ಬಿಟ್ಟ ಮಳೆ ತಂತು ನೋವ, ಅಗಲಿಕೆಯ ಕಹಿ ಕ್ಷಣ ಆದರೂ ಮರೆವೆನೆಂತು ಮುಸ್ಸಂಜೆಯ ಗೆಳೆತನ!

----------------------------------

ನೋಂದಣಿ ಐಡಿ : KPFS2-2012

0
Votes
95
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top