ಗುಬ್ಬಚ್ಚಿಗಳು
ರಚನೆ : ಎಂ ಸೋಮೇಶ
----------------------------------
ನಮ್ಮದು ಒಂದು ಸುಂದರ ಜೋಡಿ ನಮ್ಮ ಮನೆಯ ಒಡನಾಡಿ ನಮ್ಮ ಜೊತೆಯಿರುವೆ ಕೂಡಿ ಮನೆಯಲ್ಲೆಲ್ಲಾ ಹಾರಾಡಿ ಕನ್ನಡಿ ಕುಕ್ಕುತ ಬಿಂಭವ ನೋಡುತ ನೋಡುವೆ ಸುತ್ತ ಮುತ್ತ ಮಠ ಮಠ ಮಧ್ಯಾನ ಚಿಂವ್ ಚಿಂವ್ ಗಾನ ನೀಡಿತು ಮನಕೆ ಮುದವನ್ನ ಅಳಿಲು ಕಂಡು ಹೌಹಾರಿ ಅತ್ತ ಇತ್ತ ಎಗರಿ ಚೀರಿ ಮನೆಯವರೆಲ್ಲ ಎಚ್ಚರ ಮಾಡಿ ಅಳಿಲು ಓಡಿಸುವೆ ಈ ಪರಿ ಸಂಚಾರಿ ದೂರವಾಣಿಯ ಝೇಂಕಾರ ನಶಿಸುತ್ತಿದೆ ನಿನ್ನಯ ಸಂಸಾರ
----------------------------------
ನೋಂದಣಿ ಐಡಿ : KPFS2-2011