Submission 6956

ಅಪ್ಪನೆಂದರೇ ಹೀಗೆ

ರಚನೆ : ಉಷಾ ರಾಮಮೂರ್ತಿ

----------------------------------

ಆಕಾಶ ತೂತಾಗಿ ಬಿರುಮಳೆಯು ಸುರಿದರೂ ಕಾಲೆಳೆಯುತಿರುವಷ್ಟು ಕಡಲು ಭೋರ್ಗರೆದರೂ ಹಸುಗೂಸು ಇವನೆಂಬ ಭ್ರಮೆಯ ಫರಿಧಿಯೊಳಾಡಿ ಕಂಪಿಸದೆ ಮನತುಂಬಿ ನಗುನಗುತಲೇ ನಡೆವ ಅವ ದೇವನೆಂಬರಿವು ಇನಿತೂ ಇಲ್ಲ ಅವನಾಟಕ್ಕೆಲ್ಲಿ ಕೊನೆ ? ಹೇಳು ನಲ್ಲ !! ತಾಯ್ತಂದೆ ಪ್ರೀತಿಯದು ಹಸುಗೂಸಿಗಾಸರೆ ಆ ಹುಸಿಯ ನಗುವದುವೇ ಹೆತ್ತೊಡಲ ಮೊರೆಯ ತೊರೆ ಅನುಬಂಧದೀ ಬೆಸುಗೆ ಅನುರಣನಗೈಯ್ಯುತಿರೆ ವಾತ್ಸಲ್ಯದೀ ಧರೆಯು ಪರಮಸುಖಲೋಲೆ !!

----------------------------------

ನೋಂದಣಿ ಐಡಿ : KPFS2-2005

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top