Submission 6948

ನಿವೇದನೆ

ರಚನೆ : ಮುರಳೀಧರ ಹೊಳ್ಳ

----------------------------------

ಮಾಗಿದೆ ಮನಸ್ಸು ನಿನ್ನ ನೆನಪ ಕಾವಿನಲಿ ತಂಪಾಯಿತು ಹೃದಯ ನಿನ್ನ ಸಾಮಿಪ್ಯದ ನೆರಳಿನಲಿ ಅರಸಿದೆ ನಯನ ನಿನ್ನ ಒಂದು ನೋಟದ ಸಲುವಾಗಿ ಕೂಗಿ ಹೇಳುತಿದೆ ಮನಸ್ಸು ನಿನ್ನ ಮೇಲೆ ಒಲವಾಗಿದೆಯೆಂದು ತುಟಿ ಮಾತ್ರ ಹೇಳಲು ಸಾವಿರ ನೆಪ ಹೂಡಿದೆ ಧೈರ್ಯ ಮಾಡಿ ಹೇಳಿದೆ ನಿನ್ನೆದುರು ನನ್ನ ಪ್ರೀತಿಯ ಕಾದೆ ನಾ ಕಾತುರದಿ ನೀ ಹೇಳುವ ಉತ್ತರಕೆ ಹೇಗೆ ಅರ್ಥೈಸಲಿ, ನಿನ್ನ ಉತ್ತರ ಮೌನವಾದಾಗ ತಳಮಳದ ಸ್ಥಿತಿಗೆ ತಲುಪಿ ಮರುಗಿದೆ ಹೃದಯ ಹಿಡಿ ಪ್ರೀತಿಗೆ ಹಂಬಲಿಸಿ ಹಾತೂರೆದಿದೆ ಮನ ಕಾಣಿಸಿದೆ ಹೋಯಿತೆ, ನಿನಗೆ ನನ್ನ ಒದ್ದಾಟ ಪರದಾಟ ಪಾರು ಮಾಡಿ ಬಿಡು ಹುಡುಗಿ ವೇದನೆಯ ದಾಳಿಯಿಂದ ಬಡಜೀವ ನಿಂತಿದೆ, ನಿನ್ನ ಒಪ್ಪಿಗೆಯ ಮಾತಿಗೆ ನಿನ್ನ ಮುಗುಳುನಗೆಯೆ ನನಗೆ ಸಮ್ಮತಿಯ ಸೂಚನೆ

----------------------------------

ನೋಂದಣಿ ಐಡಿ : KPFS2-2000

0
Votes
100
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top