ಒಲವ ಬೆಸುಗೆ
ರಚನೆ : ವೀಣಾ ಶ್ರೀನಿವಾಸ್
----------------------------------
ನಾನು, ಯಾರೋ, ನೀನು ಯಾರೋ.. ಒಲವ ಸೇತುವೆ ಮೂಡಿದೆ ಮತ್ತೆ ಮತ್ತೆ ನೋಡುವಾಸೆ ಕಾಡಿದೆ ಇರುಳ ತುಂಬ ನಿನ್ನ ನೆನಪು ಚುಕ್ಕಿ ಹಾಗೆ ಮಿನುಗಿದೆ ಬೀಸೊ ಗಾಳಿ ಸುತ್ತಿ ಸುಳಿದು, ನಿನ್ನನೇ ಪಿಸು ನುಡಿದಿದೆ.. ಇಂದು ನಾಳೆ , ಎಂದು ಏನೋ ಎಂಬ ತುಮುಲ ತುಳುಕಿದೆ...! ತುಮುಲ ತೆರೆಯು ಸರಿದು ಮನ ತಣಿಯಲಿ ಶಿಶಿರ ಕಳೆದು, ಚೈತ್ರ ತಳೆದು ನಮ್ಮ ನಲಿವು ಮೂಡಲಿ ಎರಡನಳಿಸಿ ,ಒಂದುಗೊಳಿಸಿ ದೈವ ನಮ್ಮ ಹರಸಲಿ!
----------------------------------
ನೋಂದಣಿ ಐಡಿ : KPFS2-9991