Submission 6928

ಬಂಧುಗಳು

ರಚನೆ : ಜಯಲಕ್ಷ್ಮಿ ಪಿ

----------------------------------

ಬಂಧುಬಾಂಧವರು ಇರುವರು ಅವರವರ ಕೆಲಸದಲ್ಲಿ ಮಗ್ನರಾಗಿ ಕಷ್ಟಗಳು ಬಂದಾಗ ಹುಡುಕುವರು ಅವರಿವರನ್ನು ಬಕ ಪಕ್ಷಿಗಳಾಗಿ ಕಷ್ಟ- ಸುಖಗಳ ವಿಚಾರವಿನಿಮಯ ಸಹಾಯದ ಪ್ರಾಸ್ತಾವಿಕ ನುಡಿಗಳಾಗಿ ಯಾವ ಮಿಕ ಬೀಳಬಹುದು ನನ್ನ ಬಲೆಗೆಯೆಂಬ ಲೆಕ್ಕಾಚಾರದ ಮಾತುಗಳು . ಕೊನೆಗೆ ಸಿಕ್ಕೇ ಬಿಡ್ತು ಒಂದು ಮಿಕ ನಡೆಯಿತು ಮಿಕದೊಂದಿಗೆ ನಾಟಕದ ಕುಶಲೋಪರಿಯ ಮಾತುಗಳು, ಅಂತೂ ಇಂತೂ ಕರಗಿ ಬಿಡ್ತು ಮಿಕದ ಮನಸ್ಸು ತಾನೇ ಅವರಿಗಿಲ್ಲ ತನ್ನ ಬಿಟ್ಟರೆ, ಬೇರೆ ಗತಿ ಇಲ್ಲ ಎಂಬ ಭ್ರಮೆಯಲ್ಲಿ, ಸಹಾಯ ಹಸ್ತಕ್ಕಾಗಿ ಮುಂದಾಯ್ತು ಖುಷಿಯಲ್ಲಿ. ಕಷ್ಟ ಕಳೆಯಿತು, ಬಂಧು ಬಾಂಧವರು ಇರುವರು ಅವರವರ ಕೆಲಸದಲ್ಲಿ ಮಗ್ನರಾಗಿ . ಮತ್ತೆ ಮಿಕ ಒಂಟಿ ಆಯ್ತು ತನಗೆ ಯಾರಿಲ್ಲವೆಂಬ ಸತ್ಯದ ಅರಿವಿನಲಿ.

----------------------------------

ನೋಂದಣಿ ಐಡಿ : KPFS2-9988

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top