ನಿನ್ನ ಜನ್ಮ – ನಿನ್ನ ಜವಾಬ್ದಾರಿ
ರಚನೆ : ಶಿವಾನಂದ ಜಿ
----------------------------------
ಗರ್ಭಗುಡಿಯಿಂದ ಹೊರಬಂದ ವೀರನೇ, ಕಣ್ತೆರೆದು ಗರ್ವಿಸು; ನೀ ಬಂದಿದ್ದು ಪುಣ್ಯಭೂಮಿಗೆಂದು, ನಿನ್ನ ನಾಮಕರಣವೇ ಪಟ್ಟಾಭಿಷೇಕವೆಂದು, ನಿನ್ನ ನಾಮವೇ ರಾಜ್ಯ ವೈಭವವೆಂದು ಅರಿತು ಕಾಯಕದ ಬದುಕಿನೊಂದಿಗೆ ಜೀವಿಸು. ಪರಿಸರದ ಲಕ್ಷಣವೇ ನಿನ್ನ ಲಕ್ಷಣವೆಂದು ತಿಳಿದು, ಗಿಡ–ಮರಗಳನ್ನು ಹರಸಿ ಬೆಳೆಸು; ಬಂದ ಬೆಳೆಯನ್ನು ಹಂಚಿಕೊಂಡು ತಿನ್ನು. ಶಾಶ್ವತವಾಗುವುದು ನಿನ್ನ ಉಸಿರು ಮಾಂಸದ ಮುದ್ದೆಯ ಬಾಡಿಗೆ ತೀರಿದಾಗ ತೆರೆದುಕೊಳ್ಳುವುದು ಸ್ವರ್ಗದ ಬಾಗಿಲು; ಅದು ನಿನ್ನ ತವರು ಮನೆಯ ಆಮಂತ್ರಣ, ಮನುಜನಿಂದ ಪರಮಾತ್ಮನಾಗುವ ಪಥ.
----------------------------------
ನೋಂದಣಿ ಐಡಿ : KPFS2-9941