Submission 6864

ಕನ್ನಡಿಗರಿಗೊಂದು ಮನವಿ

ರಚನೆ : ಜೆನ್ನಿಫರ್. ಎಸ್

----------------------------------

ಕೆಚ್ಚೆದೆಯೊಳಗಿರುವ ಮೆಚ್ಚಿನ ಮೆರಗು ಕನ್ನಡ, ಅಚ್ಚಳಿಯದೇ ಎಂದಿಗೂ ಉಳಿದಿರು ನಮ್ಮ ಸಂಗಡ. ಪೆಚ್ಚಾಗದೇ ಹೆಚ್ಚಾಗಿ ಹೇಳು ನಾನೊಬ್ಬ ಕನ್ನಡಿಗ, ಮೆಚ್ಚಾಗಿರುವ ನೆಚ್ಚಿನ ನಾಡು ಈ ನಮ್ಮ ಕರ್ನಾಟಕ. ಸೌಜನ್ಯದ ಸವಿ-ನುಡಿ ಕನ್ನಡ, ಕೋಗಿಲೆ ಕಂಠದ ಮೆಲುದನಿ ಕನ್ನಡ. ಪರಭಾಷಿಕನ ಮೆತ್ತೆಳೆಯ ಇನಿ "ಎನ್ನಡ","ಎಕ್ಕಡ", ತಾಯ್ನಾಡಿನ ಕೆಚ್ಚೆದೆಯ ಖನಿ ಕನ್ನಡ ಕನ್ನಡ! ಮೆಲುಕಾಗದೇ ಮಾತಿನಲಿ,ಮರೆಯಾಗಿದೇ ಮರುಳಾಗಿ ಮಮಕಾರವ ನೀಡಿದಳು ತಾಯಿ,ಎಂದೆಂದಿಗೂ ಜೊತೆಯಾಗಿ ಮಲೆಯಾಗಿ,ಮರವಾಗಿ,ಮರೆತೇವವಳ ನೆನಪ,ನುಡಿಯಲ್ಲಿ ಮರುಕಳಿಸುವುದೇ ಕನ್ನಡ? ಮರೆತವರ ನಡೆಯಲ್ಲಿ. ಬರಿದಾದ ಮಡಿಲಲ್ಲಿ ಮಗುವಾಗಿ ಮನೆಮಾಡು ಕರುನಾಡ ಕುಡಿಯಾಗಿ ಕನ್ನಡವ ಮಾತಾಡು.

----------------------------------

ನೋಂದಣಿ ಐಡಿ : KPFS2-9938

0
Votes
110
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top