ಪ್ರೀತಿಯ ಚಂದಿರನ ಸೇರುವುದುಂಟೆ ಕಡಲು?
ರಚನೆ : ನಿಖಿಲ್ ಗೌಡ ಬಿ ಎಂ
----------------------------------
ಕೇಳು ಗೆಳತಿ, ನಿನಗೆ ಬೇರೆಯವರ ಹೋಲಿಕೆ ಬೇಕಿಲ್ಲ, ಯಾಕೆಂದರೆ ಈ ಜಗದಲ್ಲಿರುವುದು ಒಂದೇ ಒಂದು ಚಂದಿರ . ನಮ್ಮಿಬ್ಬರ ಮಧ್ಯೆ ಖುಷಿಯ ಜೊತೆ ಜೊತೆಯಲ್ಲಿ ಒಂದಿಷ್ಟು ಜಗಳವಿರಲಿ, ಯಾಕೆಂದರೆ ಚಂದಿರ ಅಮವಾಸೆಗೊಮ್ಮೆ ಹುಣ್ಣಿಮೆಗೊಮ್ಮೆ ತೋರಿಸುವನು ತನ್ನ ಅಬ್ಬರ. ನಾ ಕಡಲಾಗುವೆ, ಹೇಳಿದಂತೆ ನೀ ಚಂದಿರನಾಗಿಯೆ ಇರು. ಯಾಕೆಂದರೆ ಚಂದಿರ ಆಕರ್ಷಕವಾಗಿ ಕಂಡರು ತನ್ನ ಸೆಳೆತವನ್ನು ತೋರುವುದು ಕಡಲ ಅಲೆಗಳಿಗೆ ಮಾತ್ರ. ಆ ಕಡಲಾಗಿರುವ ನಾನು ನಿನ್ನ ಸೆಳೆತಕ್ಕೆ ಅಪ್ಪಳಿಸಿ ಅಪ್ಪಳಿಸಿ ನಾಚಿ ನೀರಾಗುವೆ. ಹೇಳಿದಂತೆ ನೀ ಚಂದಿರ ನಾ ಕಡಲು ಸೇರಲಾಗಲೆ ಇಲ್ಲ ಆ ನಿನ್ನ ಮಡಿಲು. ನನ್ನೀ ಜೀವನದಲ್ಲಿ.
----------------------------------
ನೋಂದಣಿ ಐಡಿ : KPFS2-9904