ಮರದಮ್ಮನಿಗೆ ನಮನ
ರಚನೆ : ಪವಿತ್ರಾ ವಿಷ್ಣು ಹೆಗಡೆ
----------------------------------
ಶತಕೋಟಿ ನಮನಗಳು ಸಾಲುಮರದಮ್ಮನಿಗೆ ಮರದಿ ಮಕ್ಕಳ ಕಂಡು ಸಾಕಿ ಸಲುಹಿದ ಪ್ರಭೆಗೆ ಬಡತನದ ಬಾಲ್ಯದಲಿ ಮನೆಜನಕೆ ಸಹಕಾರಿ ಪರಿಸರದ ವಿಷಯದಲಿ ಜಗಕೆ ಉಪಕಾರಿ ಮಾತೃ ಹೃದಯದ ತಾಯಿ ಬಹಳ ಮಮಕಾರಿ ಗಿಡ ನೆಡುವ ಕಾಯಕದಿ ಪತಿಗೆ ಸಹಚಾರಿ ಕುದೂರು ಹುಲಿಕಲ್ಲು ಮಾರ್ಗದಾ ನಡುವಿನಲಿ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲಿ ನೆಟ್ಟಳಾಲದ ಸಸಿಯ ತುಂಬು ಮಮತೆಯಲಿ ಉಣಿಸಿಹಳು ನೀರನ್ನು ಮಣ್ಣು ಮಡಕೆಯಲಿ ಶತಮಾನಗಳ ಕಳೆಸಿ ಜೀವನವ ನಡೆಸಿ ಸೇವೆ ಸಾಧನೆಗಾಗಿ 'ಪದ್ಮಶ್ರೀ' ಗಳಿಸಿ ನೀಡಿಹಳು ಕಿವಿಮಾತ ಪರಿಸರವ ಉಳಿಸಿ ಹೊರಟು ಹೋದಳು ಆಕೆ ಎಲ್ಲರನು ಹರಸಿ
----------------------------------
ನೋಂದಣಿ ಐಡಿ : KPFS2-9899