Submission 6780

ನೆನಪು

ರಚನೆ : ಗಣಪತಿ ಹೆಗಡೆ

----------------------------------

ತಂಗದಿರನ ತಂಪೆರೆವ ಕಿರಣಗಳ ವರ್ಷಧಾರೆ ನಿನ್ನ ಮೋಹ ಮನವತುಂಬೆ ಪ್ರೇಮಸುಧೆಯ ರಸ ನೀರೆ ನಲ್ಲೆ ನಿನ್ನ ಮಂಜುಳದನಿ ಬದುಕಬೆಳಗೋ ಚೇತನ ಹಣೆಯಲಾಡೋ ಮುಂಗುರುಳು ಹೊಳೆವ ಮೊಗಕೆ ಕೇತನ ನಯನಗಳ ಮಿಂಚು ನಲ್ಲೆ ಹೃದಯದಾ ಬಯಕೆ ದೀಪ ಚೆಂದುಟಿಯಾ ಕಿರುನಗುವೇ ತೋರಲಾಗ ಕಳೆದಕೋಪ ಕೆಂಪಡರಿದ ಕೆನ್ನೆಗುಳಿ ಕಂಡು ಮೈಮನದಿ ಚಳಿ ಬೀರುತಿರಲು ಭಾವಸಾಗರ ಕಚಗುಳಿ ಸುಮಕೋಮಲ ಭಾರದೆದೆ ಕೈಬೀಸಿ ಕರೆಯೆ ಒಲುಮೆ ಕಂಕಣ ನೂಪುರ ದನಿಯು ಹೊಮ್ಮಿರೆ ಸಿಂಗಾರ ಚಿಲುಮೆ ಕಳೆದ ದಿನದ ಸವಿನೆನಪು ಬಾಳಯಾನ ಜ್ಯೋತಿಯು ಹೃದಯದಿ ಮೊಳೆತಿಹ ಪ್ರೇಮ ಪಥಕದುವೆ ಗತಿಯು ನೋಡು ಗೆಳತಿ ಚಂದಿರನ ಸನಿಹದೊಳು ಬೆಳ್ಳಿಮೋಡ ಪ್ರೀತಿಭರಿತ ಚಿತ್ತದಲಿ ಪ್ರಿಯೆ ನಿನ್ನ ನೆನಪು ಗಾಢ

----------------------------------

ನೋಂದಣಿ ಐಡಿ : KPFS2-9873

0
Votes
75
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top