Submission 6760

ಹಸಿರ ಗೆಜ್ಜೆ

ರಚನೆ : ವಿಶಾಲಾಕ್ಷಿ ಬಿ ಕೆ

----------------------------------

ಹಸಿರ ಗೆಜ್ಜೆ ತೊಟ್ಟು , ಇಳೆಯ ಮೇಲೆ ಹೆಜ್ಜೆ ಇಟ್ಟು ಬಂದರೆ ವನಮಾಲಿ ಕಪ್ಪು ಉಟ್ಟು , ಲಜ್ಜೆ ಬಿಟ್ಟು ನಗುವಹನಿ ಚೆಲ್ಲುವುದು ಮೋಡದ ಖಯಾಲಿ. ಹನಿಯು ಮಣ್ಣ ಸೇರಿ,ಘಮ್ಮ ಗಂಧ ಬೀರಿ ತೂಗ್ಯಾವೆ ಹಸಿರ ಜೋಕಾಲಿ ಗಗನ ಚುಂಬಿ, ನಗುವ ತುಂಬಿ ಅರಳ್ಯಾವೆ ಹೂವುಗಳು ಮಾಡ್ಯಾವೆ ಕಮಾಲಿ. ಹಸಿರ ಜಾಡ, ಸೋಜಿಗವು ಕೂಡ ಸಂಭ್ರಮವ ಹಾಡೈತೆ ಜೀವಸಂಕುಲ ನೋಡ ಜಗಕ್ಕೆ ಆ ದೇವ ನೀಡೊ ಜೀವದಾನ ಉಳಿಸಿ ಬೆಳಸಿಕೊಳ್ಳಬೇಕು ನಮ್ಮ ಕೈಯಾರ ನೋಡ. ತೊಡಿಸಿ ಬಿಡೋಣ ಇಳೆಗೆ ಹಸಿರ ಗೆಜ್ಜೆ ಸವಿಯೋಣ ಪ್ರಕೃತಿ ನಿಧಿಯ ಸಿಹಿ ಸಜ್ಜೆ.

----------------------------------

ನೋಂದಣಿ ಐಡಿ : KPFS2-9859

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top