Submission 6758

ಗುಲಾಬಿಯನ್ನು ಮರೆಯೊಮ್ಮೆ

ರಚನೆ : ಸಿಂಧು ಜಿ ಎಸ್

----------------------------------

ಗುಲಾಬಿಯನ್ನು ಮರೆತು ನೋಡು ಒಮ್ಮೆ, ಮರೆಯಾದ ಹೂಗಳಪ್ಪಿಸುವುದು ಮತ್ತೊಮ್ಮೆ. ಜಡೆಗಳಿಂದ ಜಾರಿ ಹರಿದ ಮಲ್ಲಿಗೆಯ ಕಂಪು, ಮಾಲೆಗಳಿಂದ ಸೂಸಿದ ಕಣಗಿಲೆಯ ನಸುಗಂಪು. ತೋರಣದಿ ಸೇರಿದ ಸೇವಂತಿಗೆಯ ಅಂದ, ಕಂಬಗಳ ಅಲಂಕರಿಸಿದ ಡೇರೆಗಳ ಚಂದ. ನಾಲ್ಕುಮೈಲಿಯಿಂದ ತೇಲಿಬಂದ ಸಂಪಿಗೆಯ ಗಂಪು, ಮುಳುಗೋ ರವಿ ವರ್ಣದ ಕನಕಾಂಬರದ ಗುಂಪು. ಐದೆಡೆ ಒಡಲ ಬಿಚ್ಚಿದ ನಂದಿಬಟ್ಟಲ ಚೆಲುವು, ಪೂರ್ವದೆಡೆ ಮೈ ತಿರುಚಿದ ಸೂರ್ಯಕಾಂತಿಯ ಒಲವು. ಕಿವಿಯ ಮೇಲೆ ನಲಿದ ದಾಸವಾಳದ ಹಾಸ್ಯ, ಕೆಸರಿಂದ ತಲೆಯೆತ್ತಿದ ತಾವರೆಯ ಲಾಸ್ಯ. ಮುಳ್ಳು ತೋರ್ಪಡಿಕೆಯ ಗುಲಾಬಿಯಾಗದಿರಲಿ ಬಾಳು, ಶುಭ್ರ ಸಹನೆಯ ನೈದಿಲೆಯಂತಾಗು ಕರುನಾಳು.

----------------------------------

ನೋಂದಣಿ ಐಡಿ : KPFS2-9858

0
Votes
99
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top