Submission 6748

ಸಂಧ್ಯಾ ಸಂಭ್ರಮ

ರಚನೆ : ಸೀತಾ ಹವಾಲ್ದಾರ್

----------------------------------

ಸಂಜೆಯ ಹೊಂಗಿರಣ ಸೂಸುವ ನೀಲಾಕಾಶದಿ ಹಾರುತಿದೆ ಬೆಳ್ಳಕ್ಕಿಗಳ ಸಾಲು ಮೇಘರಾಜ ಸುರಿಸಿದ ಮಳೆಯಿಂದ ಭೂದೇವಿಯ ಮಡಿಲು ತಂಪಾಗಿ ತೇಲಿ ಬರುತಿದೆ ಮಣ್ಣಿನ ಘಮಲು. ಭೂ ರಮೆಯೇ ನಡುಗುವಂತೆ ಕೇಳಿ ಬರುತಿದೆ ಗುಡುಗಿನ ಆರ್ಭಟ ಆ ಆರ್ಭಟವ ಕೇಳಿ ನನ್ನೆದೆಯಲಿ ಆಗುತಿದೆ ಏನೋ ಹೊಯ್ದಾಟ. ಸೂರ್ಯ ಪ್ರಭೆಗಿಂತ ನಾನೇನು ಕಮ್ಮಿ ಎನ್ನುವಂತೆ ಬೆಳಕ ಚೆಲ್ಲುತಿದೆ ಕೋಲ್ಮಿಂಚು ಹೃದಯದಲ್ಲಿ ನೂರಾರು ಸುಂದರ ಕಲ್ಪನೆಗಳಿರಲು ನನಗಿನ್ನಲ್ಲಿ ಹೆದರಿಕೆಯ ಸಂಚು.

----------------------------------

ನೋಂದಣಿ ಐಡಿ : KPFS2-9846

0
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top