ಕನ್ನಡ ಹೃದಯಗೀತೆ
ರಚನೆ : ಸುರೇಂದ್ರ ನಾಡಿಗ್
----------------------------------
ಕನ್ನಡವೇ ಉಸಿರ ಕುಣಿತದ ಹಾಡು ಕನ್ನಡವೇ ರಕ್ತದ ಅಲೆಗಳ ನೀರಡು ಕನ್ನಡವೇ ಇತಿಹಾಸದ ಮಹಾಗರ್ಜನೆ ಕನ್ನಡವೇ ಭವಿಷ್ಯದ ಕ್ರಿಯಾಯೋಜನೆ ಕರ್ನಾಟಕವೇ ಜನ್ಮದ ಪುಣ್ಯಪ್ರದೇಶ ಕನ್ನಡವೇ ಆತ್ಮದ ಧರ್ಮೋಪದೇಶ ಕನ್ನಡತನವೇ ನಿತ್ಯಜಪದ ಮಂತ್ರ ಕನ್ನಡವೇ ನಾಡಿಯ ಹರಿವಿನ ಯಂತ್ರ ಈ ಹೊನ್ನನಾಡಿಗೆ ನಿಮ್ಮಡಿ ಬಾಗುವೆನು ಈ ಹೃದಯನುಡಿಗೆ ಶಿರವನು ಓರುವೆನು ಕನ್ನಡವೇ ಜೀವನದ ಪೂರ್ಣಾಧಾರ ಕನ್ನಡವೇ ಅಸ್ತಿತ್ವದ ಅಖಂಡ ಸಾರ
----------------------------------
ನೋಂದಣಿ ಐಡಿ : KPFS2-9802