ಸದ್ದಿಲ್ಲದ ತವಕ
ರಚನೆ : ಅಶ್ವಿತಾ ಶೆಟ್ಟಿ
----------------------------------
ಮೌನವಾಗಿದೆ ನನ್ನೊಡಲ ಬಯಕೆ ಹಾತೊರೆಯುತಿದೆ ನೈಜ ಪ್ರೇಮಕೆ! ಸಾಕೆನಿಸುತಿದೆ ಈ ತೋರಿಕೆ ಉಸಿರುಕಟ್ಟಿಸುತಿದೆ ಒಡಂಬಡಿಕೆ! ಕುಸಿದು ಹೋಗಿದೆ ನಂಬಿಕೆ ಜಾರಿ ಬೀಳುತಿದೆ ಸಮರಸ ಕುಣಿಕೆ ! ನಾಲ್ಕು ದಿನದ ಬಾಳ ನೌಕೆ ಬೇಡ ತರದ ಅವತರಣಿಕೆ! ಪಡೆಯಲೇ ಇಲ್ಲ ಅಧಿಕೃತ ಪ್ರೀತಿ ಸಿಗಲೇ ಇಲ್ಲ ನ್ಯಾಯೋಚಿತ ಸ್ಪೂರ್ತಿ ! ಇದ್ದರು ಎಲ್ಲರೂ ಒಂಟಿಯ ಭಾವ ಪರಿಚಿತರೊಡನೆ ಅಪರಿಚಿತ ಜೀವ ! ಹುಡುಕಲಿ ಎಲ್ಲಿ ಕಳಚಿದ ವೇಷ ಆತ್ಮೀಯ ಹಾದಿಯಲಿ ಭರವಸೆಯ ಶೇಷ!
----------------------------------
ನೋಂದಣಿ ಐಡಿ : KPFS2-9801