ಇಂತಿ ಪುಸ್ತಕ
ರಚನೆ : ಮನೋಜ್ ಎಂ
----------------------------------
ಓದುಗರು ಬೇಕಿನ್ನು ಮೌನ ಮರೆತು ಅಮೌನಕ್ಕೆ ಜಾರಿಹ ಜನರ ನಡುವೆ ಮನಕೆ ಅರಿವಾಗದ್ದಿದರು ಹೃದಯಗಳನ್ನು ಹಂಚಿ ನಗೆ ಬೀರದಿದ್ದರೂ ನೆಗೆಗಳನ್ನು ಚೆಲ್ಲಿ ಹರಿವಾದ ಪ್ರೀತಿ ನಗೆಯನ್ನು ಕೈ ಚೆಲ್ಲಿ ನಿಂತ ಜನರ ನಡುವೆ ಓದುಗರು ಬೇಕು ಮತ್ತೊಮ್ಮೆ ಓದುಗರು ಹೆಚ್ಚಾಗಬೇಕು ಲೋಕದ ಕಣ್ಣಿಗೆ ಯಾರನ್ನು ಹಿಯ್ಯಾಳಿಸಿಯೆ ಇಲ್ಲದವರಂತೆ ಕಂಡರೂ, ಕಮೆಂಟ್ಗಳನ್ನು ತೊಟ್ಟು ಬಿಟ್ಟು ಕಣ್ಮರೆಯಾಗುತಿಹ ಜನರ ನಡುವೆ ಓದುಗರು ಹೆಚ್ಚಾಗಬೇಕು ಹುಡುಕುವ ಹಾದಿಯಲ್ಲಿ ನಾನಿದ್ದೇನೆ? ಸಿಗುವ ಹಾದಿಯಲ್ಲಿ ನೀವಿದ್ದೀರಾ ಜನಗಳೇ? ಇಂತಿ ನಾನೊಂದು ಪುಸ್ತಕ ಮೊಬೈಲ್ ಗಳ ಮೂಲಕ ಮರೆಯಾದವ!
----------------------------------
ನೋಂದಣಿ ಐಡಿ : KPFS2-9780