ಭಾವನಾ ಪತ್ರ
ರಚನೆ : ಕಾರ್ತಿಕ್ ಎನ್ ಎಂ
----------------------------------
ಕುಡಿನೋಟದ ಮೊದಲ ಸಮ್ಮಿಲನವ ಮರೆಯಲಿ ಹೇಗೆ| ಅಂದೇ ಸಿಲುಕಿದೆ ನಿನ್ನ ಪ್ರೇಮ ಪಾಶದ ಬಲೆಗೆ|| ನಿನ್ನ ಒಪ್ಪಿಗೆ ನೀರೆರೆಯಿತು ದೀರ್ಘ ಸಹಬಾಳ್ವೆಯ ಆಸೆಗೆ| ಅನಿಸಿತ್ತು ಬ್ರಹ್ಮನಿಗೂ ಬಿಡಿಸಲಾಗದು ನಮ್ಮ ಬಾಂಧವ್ಯದ ಬೆಸುಗೆ|| ಆದರೆ ಸಪ್ತಸಾಗರದಾಚೆಗೆ ಶುರುವಾಯ್ತು ನಿನ್ನ ಯಾನ| ವಿರಹದ ಕಡಲಲ್ಲಿ ಮುಳುಗಿದ ನನಗೆ ಉಳಿದದ್ದು ಮೌನ|| ಹೇಳು, ಯಾರ ಹೆಗಲಿಗೆ ಒರಗಲಿ ಇನ್ನು| ಮುಗಿಸದೆ ಹೊರಟಿರುವೆ ನೀ ದಿವ್ಯ ಪ್ರೇಮದ ಗಾನವನು|| ಕಡೆಗೆ, ಎಲ್ಲೆ ಇರು ಎಂತೇ ಇರು ಕನ್ನಡವಾಗಿರು| ಎನ್ನೊಡಲ ಗುಡಿಯ ದೇವತೆಯಾಗಿರು|| ಪ್ರತಿ ನಾಡಿಯ ಮಿಡಿತವಾಗಿರು,ಮಿಡಿತದ ಸ್ವರವಾಗಿರು| ನೀನು ನೀನಾಗಿರು,ಪ್ರೇಮ ನೌಕೆಯ ಮುಳುಗಿಸದಿರು, ಮೆರೆಸುತಿರು||
----------------------------------
ನೋಂದಣಿ ಐಡಿ : KPFS2-9733